flash news

2017 International Year of wild life

Wednesday 29 July 2015

 ಜಿ ಎಚ್ ಎಸ್ ಪೆರಡಾಲದಲ್ಲಿ ಸ್ಕೌಟ್ ಗೈಡ್ ಶಿಬಿರ ಸಂಘಟನ ಸಮಿತಿ ರೂಪೀಕರಣ ಸಭೆ
ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ನಡೆಯಬೇಕಾಗಿರುವ ಸ್ಕೌಟ್ ಮತ್ತು ಗೈಡ್ ಮಕ್ಕಳ ಪಟಾಲಂ ನಾಯಕರ ತರಬೇತಿ ಶಿಬಿರವನ್ನು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆ ಪ್ರಯುಕ್ತ ನಡೆದ ಸಂಘಟನ ಸಮಿತಿ ರೂಪೀಕರಣ ಸಭೆಯನ್ನು ಬದಿಯಡ್ಕ ಗ್ರಾಮ ಪಂಚಾಯತಿನ ಸಮಾಜ ಕಲ್ಯಾಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಹಿನ್ ಕೇಳೋಟ್ ಅವರು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಎನ್ ಬಿ ಬಡುವನ್ ಕುಞ್ಞಿ ಅಧ್ಯಕ್ಷತೆ ವಹಿಸಿದರು. ಶಾಲಾ ಮಾತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ,  ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಮೊಯ್ದು ಪಯ್ಯಲಡ್ಕ, ಶಾಲ ಮೇಲ್ವಿಚಾರಕ ಸಮಿತಿ ಅಧ್ಯಕ್ಷ ಶ್ರೀ ಮೊಯ್ದು ಪಳ್ಳತ್ತಡ್ಕ ಮುಖ್ಯೋಪಾಧ್ಯಾಯ ಶ್ರೀ ಗುರುಮೂರ್ತಿ ಎಂ, ಹಿರಿಯ ಅಧ್ಯಾಪಕಿ ಶ್ರೀಮತಿ ಶಾಂತಮಣಿ ಮೊದಲಾದವರು ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ವಿಜಯಕುಮಾರ್ ಎ ಕಾಟುಕುಕ್ಕೆ ಸ್ವಾಗತಿಸಿ ಶಾಲಾ ಅಧ್ಯಾಪಕ ಸಂಘದ ಸಂಚಾಲಕ ಶ್ರೀ ಚಂದ್ರಹಾಸನ್ ನಂಬಿಯಾರ್ ಧನ್ಯವಾದವಿತ್ತರು. ಬೇಳ ಸಂತ ಬರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲಾ ಸ್ಕೌಟ್ ಅಧ್ಯಾಪಕ ಶ್ರೀ ರಾಜು ಸ್ಟೀವನ್ ಕ್ರಾಸ್ಟ ಕಾರ್ಯಕ್ರಮ ನಿರೂಪಿಸಿದರು. ಶಿಬಿರವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸಂಘಟಕ ಸಮಿತಿಯನ್ನು ರೂಪೀಕರಿಸಲಾಯಿತು. ಶ್ರೀ ಮಾಹಿನ್ ಕೇಳೋಟ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ವಿವಿಧ ಸಮತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು ಮೊದಲಾದವರನ್ನು ಆಯ್ಕೆ ಮಾಡಲಾಯಿತು.
ജി.എച്.എസ് പെര്‍ഡാലയില്‍ സ്കൗട്ട് ഗൈഡ് ക്യാമ്പ്
 ഭാരത് സ്കൗട്സ് ആന്റ് ഗൈഡ്സ് കുമ്പള ലോകല്‍ അസ്സോസ്സിയേശന്റെ ഈ വര്‍ഷത്തെ സ്കൗട്ട് ഗൈഡ് പട്രോള്‍ ലീഡേഴ്സ് ട്രൈനിങ്ങ് ക്യാമ്പ പെര്‍ഡാല ജി എച് എസ്സില്‍ നടത്താന്‍ തീരുമാനിച്ചു. അതിന്റെ സംഘാടക സമിതി രൂപീകരണ യോഗം ബദിയഡുക്ക ഗ്രാമ പഞ്ചായത്ത് വെല്‍ഫെയര്‍ സ്റ്റാണ്ടിങ്ങ് കമ്മിറ്റി ചെയര്‍മാന്‍ ശ്രീ മാഹിന്‍ കേളോട് ഉത്ഘാടനം ചെയ്ചു. പിടിഎ അധ്യക്ഷന്‍ ശ്രീ എന്‍ ബി ബഡുവന്‍കുഞ്ഞി യോഗത്തില്‍ അധ്യക്ഷം വഹിച്ചും. മദര്‍ പിടിഎ പ്രസിഡണ്ട് ശ്രീമതി ശ്രീദേവി, എസ് എം സി ചെയര്‍മ്യാന്‍ ശ്രീ മൊയ്ദു പള്ളത്തടുക്ക, പിടിഎ വൈസ് പ്രസിഡണ്ട് ശ്രീ മൊയ്ദു പയ്യലഡുക്ക, ഹെഡ് മാസ്റ്റര്‍ ശ്രീ ഗുരുമൂര്‍ത്തി, സീനിയര്‍ അധ്യാപിക ശ്രീമതി ശാന്തമണി മുതലായവര്‍ ആശംസകള്‍ അര്‍പ്പിച്ചു. സ്കൗട്സ് ആന്റ് ഗൈഡ്സ് കുമ്പള ലോകല്‍ അസ്സോസ്സിയേശന്‍ സെക്രട്ടറി ശ്രീ വിജയകുമാര്‍ സ്വാഗതവും, സ്റ്റാഫ് സെക്രട്ടറി ശ്രീ ചന്ദ്രഹാസന്‍ നമ്പ്യാര്‍ നന്ദിയും പറഞ്ഞു.

No comments:

Post a Comment